ಶುಂಠಿ ಬೆಳೆಯಲ್ಲಿ ಮೊಜೆಕ್ ರೆನುವಿಸ್ ನ ಮಹತ್ವ ಮತ್ತು ಲಾಭಗಳು

  • Mosaic India
  • Crop Nutrition
  • ಶುಂಠಿ ಬೆಳೆಯಲ್ಲಿ ಮೊಜೆಕ್ ರೆನುವಿಸ್ ನ ಮಹತ್ವ ಮತ್ತು ಲಾಭಗಳು
Ginger Farming in Karnataka

ಶುಂಠಿ ಬೆಳೆಯಲ್ಲಿ ಮೊಜೆಕ್ ರೆನುವಿಸ್ ನ ಮಹತ್ವ ಮತ್ತು ಲಾಭಗಳು

ಶುಂಠಿ (Zingiber officinale) ಭಾರತದಲ್ಲಿಒಂದು ಪ್ರಮುಖ ಮಸಾಲೆ ಬೆಳೆಯಾಗಿದ್ದು ನೂರಾರು ವರ್ಷಗಳಿಂದ ಬೆಳೆಯಲಾಗುತ್ತಿದೆ. ಇದರ ಬೇರುಗಳನ್ನು ಭಾರತೀಯ ಅಡುಗೆ, ಆಯುರ್ವೇದ ಔಷಧಿ ಮತ್ತು ಸೌಂದರ್ಯೋತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತವು ಜಗತ್ತಿನ ಪ್ರಮುಖ ಶುಂಠಿ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಶುಂಠಿ ಬೆಳೆಗೆ ಹೆಚ್ಚು ಫಲವತ್ತಾದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣು ಸೂಕ್ತ. ಶುಂಠಿ ಹೆಚ್ಚು ಪೋಷಕಾಂಶಗಳನ್ನು ಇಷ್ಟಪಡುವ ಬೆಳೆಯಾಗಿದ್ದು, ಸಮಗ್ರ ಪೋಷಕಾಂಶಗಳ ನಿರ್ವಹಣೆ ಪದ್ಧತಿಯು ಬೆಳವಣಿಗೆ ಮತ್ತು ಹೆಚ್ಚಿನ ಉತ್ಪಾದನೆಯಲ್ಲಿ ಅತಿ ಪ್ರಮುಖ ಪಾತ್ರವನ್ನು ಹೊಂದಿದೆ. ಈ ಬೆಳೆಗೆ ಪೋಷಕಾಂಶಗಳು ಸಮತೋಲನವಾಗಿ ಮತ್ತು ನಿರಂತರವಾಗಿ ಅವಶ್ಯವಾಗಿರುತ್ತವೆ. ಈ ಪೈಕಿ ರಂಜಕ ಒಂದು ಪ್ರಮುಖ ಪೋಷಕಾಂಶವಾಗಿದೆ. ಆದರೆ ಮಣ್ಣಿನಲ್ಲಿರುವ ರಂಜಕದ ಬಹುಪಾಲು ಅಜೈವಿಕ ರೂಪದಲ್ಲಿದ್ದು, ಸಸ್ಯಗಳಿಗೆ ಲಭ್ಯವಿರುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಮೊಜೆಕ್ ಕಂಪನಿಯು ರೆನುವಿಸ್ ಗೊಬ್ಬರವನ್ನು ಪರಿಚಯಿಸುತ್ತಿದೆ.

ರೆನುವಿಸ್ ಅಂದರೇನು?

ರೆನುವಿಸ್, ಮೊಜೆಕ್ ಸಂಶೋಧನೆ ಆಧಾರಿತ ಜೈವಿಕ ಗೊಬ್ಬರ. ರೆನುವಿಸ್ ಗೊಬ್ಬರ ಲೇಪನ ಮತ್ತು ಫರ್ಟಿಗೇಶನ್‌ನಲ್ಲಿ ಬಳಸಬಹುದಾದ ಭಾರತದ ಮೊದಲ ಜೈವಿಕ ಗೊಬ್ಬರ. ಇದು ಉತ್ತಮ ಗುಣಮಟ್ಟದ ಬ್ಯಾಸಿಲ್ಲಸ್ ಆಧಾರಿತ ಸೂಕ್ಷ್ಮಜೀವಿಯಾಗಿದ್ದು, ಅತ್ಯುತ್ತಮ ಗುಣಮಟ್ಟದ ಮಾಧ್ಯಮವನ್ನು ಹೊಂದಿದ್ದು, ರಂಜಕದ ಜೊತೆಗೆ ಇತರೆ 7 ಪ್ರಮುಖ ಅಗತ್ಯ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.

ರೆನುವಿಸ್ ಎರಡು ರೂಪಗಳಲ್ಲಿ ಲಭ್ಯವಿದೆ:

  1. ರೆನುವಿಸ್ ಫಾಸ್-ಪ್ರೋ ಕೋಟ್: ಗೊಬ್ಬರಕ್ಕೆ ಲೇಪನ ಮಾಡಲು
  2. ರೆನುವಿಸ್ ಫಾಸ್-ಪ್ರೋ: ರಸಾವರಿ/ಫರ್ಟಿಗೇಶನ್‌ ಅಥವಾ ಡ್ರೆಂಚಿಗ್ ನಲ್ಲಿ ನೀಡಲು

ರೆನುವಿಸ್ ವೈಶಿಷ್ಟ್ಯಗಳು:

  • ಉತ್ತಮ ಗುಣಮಟ್ಟದ ಬ್ಯಾಸಿಲ್ಲಸ್ ಆಧಾರಿತ ಸೂಕ್ಷ್ಮಜೀವಿ.
  • ಅತ್ಯುತ್ತಮ ಗುಣಮಟ್ಟದ ಮಾಧ್ಯಮ.
  • ರಂಜಕದ (P) ಜೊತೆಗೆ ಇತರೆ 7 ಪ್ರಮುಖ ಪೋಷಕಾಂಶಗಳಾದ ಸಾರಜನಕ (N), ಮೆಗ್ನೀಶಿಯಂ (Mg), ಗಂಧಕ (S), ತಾಮ್ರ (Cu), ಕಬ್ಬಿಣ (Fe), ಸತು (Zn) ಮತ್ತು ಮ್ಯಾಂಗನೀಸ್ (Mn) ಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.
  • ಹೆಚ್ಚಿನ ಕೃಷಿ-ರಸಾಯನಗಳೊಂದಿಗೆ ಟ್ಯಾಂಕ್-ಮಿಕ್ಸ್ ಹೊಂದಾಣಿಕೆ.
  • ರೆನುವಿಸ್‌ 24 ತಿಂಗಳ ದೀರ್ಘ ಕಾಲವಧಿ ಹೊಂದಿದೆ.

ಫಾಸ್ಪ್ರೋ ಕೋಟ್ ಬಳಕೆಯ ಲಾಭಗಳು:

  • ಇದು ತೈಲ ಆಧಾರಿತ ಉತ್ಪನ್ನವಾಗಿದ್ದು, ಗೊಬ್ಬರದ ಕಾಳುಗಳ ಮೇಲೆ ಲೇಪನ ಮಾಡಿದಾಗ ನೀರು ಹೀರಿಕೊಳ್ಳುವುದಿಲ್ಲ.
  • ನಾಟಿ ಮಾಡುವಾಗ/ಮೊದಲ ಗೊಬ್ಬರದ ಜೊತೆ ಮತ್ತು ಬೆಳೆಗೆ 3 ರಿಂದ 4 ತಿಂಗಳಾದಾಗ ಗೊಬ್ಬರದ ಜೊತೆ ಬಳಸಲು ಸೂಕ್ತವಾಗಿದೆ.
  • ಎಲ್ಲಾ ರೀತಿಯ ಕಾಳು ಗೊಬ್ಬರಗಳೊಂದಿಗೆ ಲೇಪನ ಮಾಡಬಹುದು.

ಫಾಸ್ಪ್ರೋ ಬಳಕೆಯ ಲಾಭಗಳು:

  • ಇದು ನೀರಿನ ಆಧಾರಿತ ಉತ್ಪನ್ನವಾಗಿದ್ದು ಸುಲಭವಾಗಿ ಬಳಸಬಹುದು.
  • ರಸಾವರಿ (ಫರ್ಟಿಗೇಶನ್), ಡ್ರೆಂಚಿಂಗ್ ಮಾಡಲು ಸೂಕ್ತವಾಗಿದೆ.
  • ಹೆಚ್ಚಿನ ಕೂಲಿ ಆಳುಗಳ ಅವಶ್ಯಕತೆಯಿಲ್ಲ.
  • ನಿಖರವಾಗಿ ಮತ್ತು ನಿರಂತರವಾಗಿ ಬಳಸಲು ಸೂಕ್ತವಾಗಿದೆ.
  • ನೀರಿನಲ್ಲಿ ಕರಗುವ ಗೊಬ್ಬರಗಳು, ದ್ರವ ಗೊಬ್ಬರಗಳು ಮತ್ತು ಇತರ ಕೃಷಿ-ರಸಾಯನಗಳೊಂದಿಗೆ ಉಪಯೋಗಿಸಬಹುದು.

ರೆನುವಿಸ್ ಹೇಗೆ ಕೆಲಸ ಮಾಡುತ್ತದೆ?

  • ರೆನುವಿಸ್‌ನಲ್ಲಿ ಇರುವ ಬ್ಯಾಕ್ಟೀರಿಯಾ ಜೈವಿಕ ಆಮ್ಲಗಳು ಮತ್ತು ಎಂಜೈಮ್‌ಗಳನ್ನು ಉತ್ಪಾದಿಸುತ್ತದೆ.
  • ಜೈವಿಕ ಆಮ್ಲಗಳು ಮಣ್ಣಿನಲ್ಲಿರುವ ಕರಗದ ರಂಜಕವನ್ನು ಕರಗಿಸಿ, ಬೆಳೆಗಳು ತೆಗೆದುಕೊಳ್ಳುವ ರೂಪಕ್ಕೆ ಪರಿವರ್ತಿಸಲು ಸಹಾಯ ಮಾಡುತ್ತದೆ.
  • ಜೈವಿಕವಾಗಿ ಲಭ್ಯವಿರುವ ರಂಜಕದ ಹೆಚ್ಚಳವು ವಿಸ್ತೃತ ಬೇರು ಬೆಳವಣಿಗೆಯನ್ನು ವೃದ್ಧಿಸುವುದರ ಜೊತೆಗೆ ಇತರ ಪೋಷಕಾಂಶಗಳ ಹೀರುವಿಕೆಯನ್ನು ಸುಧಾರಿಸುತ್ತದೆ.
  • ಇದರಿಂದ ಅಂತಿಮವಾಗಿ ಸಸ್ಯದ ಉತ್ತಮ ಬೆಳವಣಿಗೆಯಾಗಿ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತದೆ.

ಶುಂಠಿ ಬೆಳೆಯಲ್ಲಿ ಮೊಜೆಕ್ ರೆನುವಿಸ್ ನ ಪ್ರಯೋಜನಗಳು:

  1. ಪಾಸ್ಫೇಟ್ ಲಭ್ಯತೆಯನ್ನು ಹೆಚ್ಚಿಸುತ್ತದೆ: ಶುಂಠಿ ಬೆಳೆಗೆ ಬೇರುಗಳ ಬೆಳವಣಿಗೆ ಅತ್ಯಂತ ಮುಖ್ಯ, ರೆನುವಿಸ್ ಫಾಸ್ಫೇಟ್ ಲಭ್ಯತೆಯನ್ನು ಹೆಚ್ಚಿಸಿ, ಬೇರುಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಇದು ಸಸ್ಯದ ಶಕ್ತಿಯುತ ಬೆಳವಣಿಗೆಗೆ ಕಾರಣವಾಗುತ್ತದೆ.
  2. ಪಾಸ್ಫೇಟ್ ಜೊತೆಗೆ ಇತರೆ 7 ಪ್ರಮುಖ ಪೋಷಕಾಂಶಗಳಾದ ಸಾರಜನಕ (N), ಮೆಗ್ನೀಶಿಯಂ (Mg), ಗಂಧಕ (S), ತಾಮ್ರ (Cu), ಕಬ್ಬಿಣ (Fe), ಸತು (Zn) ಮತ್ತು ಮ್ಯಾಂಗನೀಸ್ (Mn) ಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬೆಳೆ ವೇಗವಾಗಿ ಮತ್ತು ಆರೋಗ್ಯವಾಗಿ ಬೆಳೆಯಲು ಸಹಕರಿಸುತ್ತದೆ.
  3. ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುತ್ತದೆ: ರೆನುವಿಸ್ ಉಪಯೋಗಿಸಿದಾಗ ಪೋಷಕಾಂಶಗಳ ಲಭ್ಯತೆ ಉತ್ತಮವಾಗಿರುವುದರಿಂದ ಶುಂಠಿ ಮರಿಗಳ ಸಂಖ್ಯೆ ಹೆಚ್ಚಾಗುತ್ತವೆ. ಮರಿಗಳು ಹೆಚ್ಚಾದಾಗ ಗೆಡ್ಡೆಯ ಗಾತ್ರ ಮತ್ತು ಉದ್ದ ಹೆಚ್ಚಾಗುತ್ತದೆ. ತೂಕ ಮತ್ತು ಎಣ್ಣೆಯ ಅಂಶ ಹೆಚ್ಚಾಗಿ ಉತ್ತಮ ಗುಣಮಟ್ಟದ ಉತ್ಪನ್ನ ದೊರೆಯುತ್ತದ. ಸರಿಸುಮಾರು ಶೇಕಡಾ 8 ರಿಂದ10 ರಷ್ಟು ಇಳುವರಿಯಲ್ಲಿ ಹೆಚ್ಚಳ ಕಾಣಬಹುದು.
  4. ರಾಸಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು: ರೆನುವಿಸ್ ಫಾಸ್ಫೇಟ್ ಮತ್ತು ಇತರೆ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ. ಇದರಿಂದ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಕಡಿಮೆಯಾಗುತ್ತದೆ, ಕೃಷಿ ವೆಚ್ಚ ಕಡಿಮೆಯಾಗುತ್ತದೆ ಮತ್ತು ಪರಿಸರ ಸ್ನೇಹಿ ಕೃಷಿ ಸಾಧ್ಯವಾಗುತ್ತದೆ.
  5. ಮಣ್ಣಿನ ಆರೋಗ್ಯ ಸುಧಾರಣೆ: ರೆನುವಿಸ್ ಮಣ್ಣಿನ ಜೈವಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದು ಮಣ್ಣಿನ ರಚನೆ, ಗಾಳಿಯಾಡುವಿಕೆ, ನೀರು ಹಿಡಿದಿಡುವ ಸಾಮರ್ಥ್ಯ ಮತ್ತು ಫಲವತ್ತತೆಯನ್ನು ಹೆಚ್ಚಿಸಲು ಸಹಕರಿಸುತ್ತದೆ.

ಶುಂಠಿ ಬೆಳೆಯಲ್ಲಿ ರೆನುವಿಸ್ ಬಳಸುವುದು ಸುಸ್ಥಿರ, ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಕೃಷಿ ವಿಧಾನವಾಗಿದೆ. ರೆನುವಿಸ್ ಶುಂಠಿ ಬೆಳೆಯ ಉತ್ತಮ ಬೆಳವಣಿಗೆ, ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಕರಿಸುತ್ತದೆ. ಸಮಗ್ರ ಪೋಷಕಾಂಶಗಳ ಪದ್ಧತಿಯನ್ನು ಅನುಸರಿಸುವ ರೈತರು ಮೊಜೆಕ್ ರೆನುವಿಸ್ ಅನ್ನು ಒಂದು ಭಾಗವಾಗಿ ಉಪಯೋಗಿಸಿದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯಬಹುದು.

Share this post
Author: Yogananda Gowda MCRegional Agronomist at Mosaic India, (Masters in Soil Science and Agricultural Chemistry).

Leave a Reply

Your email address will not be published. Required fields are marked *