ಅಡಿಕೆ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ  ನಿರ್ವಹಣೆ ಮತ್ತು  ಮಣ್ಣಿನ ಪುನರುಜ್ಜೀವನದಲ್ಲಿ  ‘ರೆನುವಿಸ್’ನ ಪಾತ್ರ

  • Mosaic India
  • Crop Nutrition
  • ಅಡಿಕೆ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ  ನಿರ್ವಹಣೆ ಮತ್ತು  ಮಣ್ಣಿನ ಪುನರುಜ್ಜೀವನದಲ್ಲಿ  ‘ರೆನುವಿಸ್’ನ ಪಾತ್ರ
Areca Nut Farming in Karnataka

ಅಡಿಕೆ ಕೃಷಿಯಲ್ಲಿ ಸಮಗ್ರ ಪೋಷಕಾಂಶಗಳ  ನಿರ್ವಹಣೆ ಮತ್ತು  ಮಣ್ಣಿನ ಪುನರುಜ್ಜೀವನದಲ್ಲಿ  ‘ರೆನುವಿಸ್’ನ ಪಾತ್ರ

ಕರ್ನಾಟಕದ ವಾಣಿಜ್ಯ ಬೆಳೆಗಳ ರಾಜ ‘ಅಡಿಕೆ’. ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ಬಯಲುಸೀಮೆಯ ಕೆಲವು ಭಾಗಗಳಲ್ಲಿ ಅಡಿಕೆ ಕೇವಲ ಒಂದು ಬೆಳೆಯಲ್ಲ, ಅದು ರೈತರ ಆರ್ಥಿಕ ಬೆನ್ನೆಲುಬು. ಆದರೆ, ಕಳೆದ ಒಂದು ದಶಕದಿಂದ ಅಡಿಕೆ ಬೆಳೆಗಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹವಾಮಾನ ಬದಲಾವಣೆ, ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗ ಮತ್ತು ಇಳುವರಿಯಲ್ಲಿನ ಅಸ್ಥಿರತೆ ರೈತರನ್ನು ಕಂಗೆಡಿಸಿದೆ.

ರೈತರು ಇಳುವರಿ ಹೆಚ್ಚಿಸಲು ಎಷ್ಟೇ ರಾಸಾಯನಿಕ ಗೊಬ್ಬರಗಳನ್ನು ಸುರಿದರೂ, ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೇನು? ನಮ್ಮ ಮಣ್ಣು ತನ್ನ ಚೈತನ್ಯವನ್ನು ಕಳೆದುಕೊಂಡಿರುವುದೇ ಇದಕ್ಕೆ ಮೂಲ ಕಾರಣ. ಇಲ್ಲಿಯೇ “ಸಮಗ್ರ ಪೋಷಕಾಂಶಗಳ ನಿರ್ವಹಣೆ”  ಮತ್ತು ಮೊಜೆಕ್ ‘ರೆನುವಿಸ್’ ನಂತಹ ಆಧುನಿಕ ಜೈವಿಕ ತಂತ್ರಜ್ಞಾನದ ಅಗತ್ಯತೆ ಮುನ್ನೆಲೆಗೆ ಬರುತ್ತದೆ.

ಅಡಿಕೆ ಕೃಷಿಯಲ್ಲಿ ಪ್ರಸ್ತುತ ಎದುರಾಗಿರುವ ಸವಾಲುಗಳು

ಅಡಿಕೆ ಒಂದು ದೀರ್ಘಕಾಲಿಕ ಬೆಳೆ. ಒಂದೇ ಜಾಗದಲ್ಲಿ ವರ್ಷಗಟ್ಟಲೆ ಬೆಳೆಯುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಬರಿದಾಗುತ್ತವೆ.

  1. ಮಣ್ಣಿನ ರಸಸಾರ (Soil pH) ಏರುಪೇರು: ಮಲೆನಾಡು ಮತ್ತು ಕರಾವಳಿಯ ಮಣ್ಣು ಸ್ವಾಭಾವಿಕವಾಗಿ ಆಮ್ಲೀಯವಾಗಿರುತ್ತದೆ. ಇದರ ಜೊತೆಗೆ ಅತಿಯಾದ ರಾಸಾಯನಿಕಗಳ ಬಳಕೆ ಮಣ್ಣನ್ನು ಮತ್ತಷ್ಟು ಆಮ್ಲೀಯವಾಗಿಸುತ್ತದೆ.
  2. ಪೋಷಕಾಂಶಗಳ ಅಲಭ್ಯತೆ: ನಾವು ಹಾಕುವ ಡಿ.ಎ.ಪಿ ಅಥವಾ ಸಿಂಗಲ್ ಸೂಪರ್ ಫಾಸ್ಫೇಟ್ ನಲ್ಲಿರುವ ರಂಜಕ ಮಣ್ಣಿನಲ್ಲಿರುವ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡ್‌ಗಳ ಜೊತೆ ಸೇರಿ ಗಟ್ಟಿಯಾಗುತ್ತದೆ. ಇದರಿಂದ ಗಿಡದ ಬೇರುಗಳಿಗೆ ಇವು ಲಭ್ಯವಾಗುವುದಿಲ್ಲ.
  3. ಸೂಕ್ಷ್ಮಜೀವಿಗಳ ನಾಶ: ಶಿಲೀಂಧ್ರನಾಶಕಗಳ ಮತ್ತು ಕಳೆನಾಶಕಗಳ ಅತಿಯಾದ ಬಳಕೆಯು ಮಣ್ಣಿನಲ್ಲಿರುವ ಎರೆಹುಳು ಮತ್ತು ಉಪಯುಕ್ತ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಇದರಿಂದ ಮಣ್ಣು “ನಿರ್ಜೀವ” ವಾಗಿ ಪರಿವರ್ತನೆಯಾಗುತ್ತಿದೆ.

ಸಮಗ್ರ ಪೋಷಕಾಂಶಗಳ ನಿರ್ವಹಣೆ ಎಂದರೇನು?

ಕೇವಲ ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸದೇ, ಸಾವಯವ ಗೊಬ್ಬರಗಳು (ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್), ಹಸಿರೆಲೆ ಗೊಬ್ಬರ ಮತ್ತು ಮುಖ್ಯವಾಗಿ ಜೈವಿಕ ಗೊಬ್ಬರಗಳನ್ನು ಸಮತೋಲಿತವಾಗಿ ಬಳಸುವುದೇ ಸಮಗ್ರ ಪೋಷಕಾಂಶಗಳ ನಿರ್ವಹಣೆ. ಇದರ ಉದ್ದೇಶ ಕೇವಲ ಇಳುವರಿ ಹೆಚ್ಚಿಸುವುದಲ್ಲ, ಬದಲಾಗಿ ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಫಲವತ್ತತೆಯನ್ನು ಮುಂದಿನ ಪೀಳಿಗೆಗೂ ಉಳಿಸುವುದು.

ಸಮಗ್ರ ಪೋಷಕಾಂಶಗಳ ನಿರ್ವಹಣೆ ಪದ್ಧತಿಯಲ್ಲಿ “ಕೊಂಡಿ”ಯಂತೆ ರೆನುವಿಸ್ ಕೆಲಸ ಮಾಡುತ್ತದೆ.

ರೆನುವಿಸ್: ಮಣ್ಣಿನ ಪುನರುಜ್ಜೀವನಕ್ಕೆ ಸಂಜೀವಿನಿ

‘ರೆನುವಿಸ್’ ಎಂಬುದು ಕೇವಲ ಒಂದು ಗೊಬ್ಬರವಲ್ಲ, ಇದೊಂದು ಮಣ್ಣಿನ ಪುನರುಜ್ಜೀವನಕಾರಕ. ಇದು ಮುಖ್ಯವಾಗಿ ಬ್ಯಾಸಿಲಸ್ ಪ್ರಭೇದದಂತಹ ಶಕ್ತಿಶಾಲಿ ಮತ್ತು ಉಪಯುಕ್ತ ಬ್ಯಾಕ್ಟೀರಿಯಾಗಳ ಒಕ್ಕೂಟವಾಗಿದೆ.

ರೆನುವಿಸ್, ಮೊಜೆಕ್ ಸಂಶೋಧನೆ ಆಧಾರಿತ ಜೈವಿಕ ಗೊಬ್ಬರ. ರೆನುವಿಸ್ ಗೊಬ್ಬರ ಲೇಪನ ಮತ್ತು ಫರ್ಟಿಗೇಶನ್‌ನಲ್ಲಿ ಬಳಸಬಹುದಾದ ಭಾರತದ ಮೊದಲ ಜೈವಿಕ ಗೊಬ್ಬರ. ಇದು ಉತ್ತಮ ಗುಣಮಟ್ಟದ ಬ್ಯಾಸಿಲ್ಲಸ್ ಆಧಾರಿತ ಸೂಕ್ಷ್ಮಜೀವಿಯಾಗಿದ್ದು, ಅತ್ಯುತ್ತಮ ಗುಣಮಟ್ಟದ ಮಾಧ್ಯಮವನ್ನು ಹೊಂದಿದ್ದು, ರಂಜಕದ ಜೊತೆಗೆ ಇತರೆ 7 ಪ್ರಮುಖ ಅಗತ್ಯ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.

ರೆನುವಿಸ್ ಎರಡು ರೂಪಗಳಲ್ಲಿ ಲಭ್ಯವಿದೆ:

  1. ರೆನುವಿಸ್ ಫಾಸ್-ಪ್ರೋ ಕೋಟ್: ಗೊಬ್ಬರಕ್ಕೆ ಲೇಪನ ಮಾಡಲು
  2. ರೆನುವಿಸ್ ಫಾಸ್-ಪ್ರೋ: ರಸಾವರಿ/ಹನಿ ನೀರಾವರಿಯಲ್ಲಿ ಅಥವಾ ಡ್ರೆಂಚಿಗ್ ನಲ್ಲಿ ನೀಡಲು

ಅಡಿಕೆ ತೋಟಗಳಲ್ಲಿ ರೆನುವಿಸ್ ಏಕೆ ಅನಿವಾರ್ಯ ಎಂಬುದನ್ನು ಈ ಕೆಳಗಿನ ಅಂಶಗಳು ವಿವರಿಸುತ್ತವೆ:

1. ರಂಜಕ ಮತ್ತು ಇತರ 7 ಪೋಷಕಾಂಶಗಳ ಲಭ್ಯತೆ: ಅಡಿಕೆ ಮರದ ಬೇರುಗಳ, ಹೂಗೊಂಚಲುಗಳ ಬೆಳವಣಿಗೆಗೆ ಮತ್ತು ಅತ್ಯುತ್ತಮ ಅಡಿಕೆ ರಚನೆಯಾಗಿ ಹೆಚ್ಚಿನ ಇಳುವರಿಯನ್ನು ಪಡೆಯಲು ರಂಜಕ ಅತ್ಯಗತ್ಯ. ಆದರೆ ಅಡಿಕೆ ಬೆಳೆಯುವ ಹೆಚ್ಚಿನ ಭಾಗದ ಮಣ್ಣಿನಲ್ಲಿ ರಂಜಕವು ಸ್ಥಿರವಾಗಿದ್ದು ಬೆಳೆಗೆ ಲಭ್ಯವಿರುವುದಿಲ್ಲ. ರೆನುವಿಸ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿ 11 ವಿಧದ ಜೈವಿಕ ಆಮ್ಲಗಳನ್ನು ಸ್ರವಿಸುತ್ತವೆ. ಈ ಆಮ್ಲಗಳು ಮಣ್ಣಿನಲ್ಲಿ ಕಲ್ಲಿನಂತಾಗಿರುವ/ಕರಗದ ರಂಜಕವನ್ನು ಕರಗಿಸಿ, ಬೆಳೆ ಸುಲಭವಾಗಿ ಹೀರಿಕೊಳ್ಳುವ ಸ್ಥಿತಿಗೆ ತರುತ್ತದೆ ಮತ್ತು ಇತರ 7 ಪೋಷಕಾಂಶಗಳಾದ ಸತು (ಜಿಂಕ್), ಸಾರಜನಕ, ಮೆಗ್ನೀಷಿಯಂ, ಗಂಧಕ, ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರ ಲಭ್ಯತೆಯನ್ನು ಹೆಚ್ಚಿಸಿ ಗಿಡದ ಬೇರುಗಳಿಗೆ ಉಣಬಡಿಸುತ್ತವೆ.

2. ಬೇರುಗಳ ಬೆಳವಣಿಗೆ: ಅಡಿಕೆ ಮರದ ಆರೋಗ್ಯ ಅದರ ಬೇರಿನ ವ್ಯವಸ್ಥೆಯನ್ನು ಅವಲಂಬಿಸಿದೆ. ರೆನುವಿಸ್ ಬಳಸಿದಾಗ, ಬೇರುಗಳ ಸುತ್ತಲಿನ ವಲಯದಲ್ಲಿ ಜೈವಿಕ ಚಟುವಟಿಕೆ ಹೆಚ್ಚಾಗುತ್ತದೆ. ಇದು ಹೊಸ ಮತ್ತು ಎಳೆಯ ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೆಚ್ಚು ಬೇರುಗಳಿದ್ದರೆ, ಮಣ್ಣಿನಿಂದ ನೀರು ಮತ್ತು ಆಹಾರವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ.

3. ಮಣ್ಣಿನ ಆರೋಗ್ಯ ಮತ್ತು ರಚನೆ ಸುಧಾರಣೆ: ರೆನುವಿಸ್ ಮಣ್ಣಿನಲ್ಲಿರುವ ಸಾವಯವ ತ್ಯಾಜ್ಯಗಳನ್ನು ತ್ವರಿತವಾಗಿ ಕಳಿಸುವ ಕಿಣ್ವಗಳನ್ನು ಉತ್ಪಾದಿಸುತ್ತದೆ. ಇದರಿಂದ ಮಣ್ಣಿನಲ್ಲಿ ಸಾವಯವ ಪ್ರಮಾಣ ಹೆಚ್ಚಾಗಿ, ಮಣ್ಣು ಮೃದುವಾಗುತ್ತದೆ ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.

ಅಡಿಕೆ ಕೃಷಿಯಲ್ಲಿ ರೆನುವಿಸ್ ಬಳಕೆಯ ಪ್ರಮುಖ ಲಾಭಗಳು

ಅಡಿಕೆ ಬೆಳೆಗಾರರು ತಮ್ಮ ಸಮಗ್ರ ಪೋಷಕಾಂಶಗಳ ನಿರ್ವಹಣೆ ಪದ್ಧತಿಯಲ್ಲಿ ರೆನುವಿಸ್ ಅಳವಡಿಸಿಕೊಳ್ಳುವುದರಿಂದ ಆಗುವ ಲಾಭಗಳ ವಿವರ ಇಲ್ಲಿದೆ:

  • ಗುಣಮಟ್ಟದ ಇಳುವರಿ: ಪೋಷಕಾಂಶಗಳ ಸಮರ್ಪಕ ಪೂರೈಕೆಯಾಗುವುದರಿಂದ ಅಡಿಕೆ ಕಾಯಿಗಳು ದಪ್ಪವಾಗುತ್ತವೆ ಮತ್ತು ತೂಕ ಬರುತ್ತವೆ. ಅಡಿಕೆಯಲ್ಲಿ ತಿರುಳು ಚೆನ್ನಾಗಿ ತುಂಬಿಕೊಳ್ಳುತ್ತದೆ, ಇದರಿಂದ ಚಾಲಿಯ ಗುಣಮಟ್ಟ ಹೆಚ್ಚಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ.
  • ಗೊಬ್ಬರದ ಖರ್ಚಿನಲ್ಲಿ ಉಳಿತಾಯ: ನಾವು ಹಾಕುವ ರಾಸಾಯನಿಕ ಗೊಬ್ಬರದಲ್ಲಿ ಸಾಮಾನ್ಯವಾಗಿ 30-40% ಮಾತ್ರ ಗಿಡಕ್ಕೆ ಸಿಗುತ್ತದೆ. ಉಳಿದದ್ದು ಮಣ್ಣಿನಲ್ಲಿ ವ್ಯರ್ಥವಾಗುತ್ತದೆ. ಅದರಲ್ಲೂ ರಂಜಕ ಕೇವಲ 10-20 % ಮಾತ್ರ ಬೆಳೆಗೆ ಸಿಗುವುದು. ರೆನುವಿಸ್ ಬಳಸುವುದರಿಂದ ರಸಗೊಬ್ಬರಗಳ ಬಳಕೆಯ ದಕ್ಷತೆ ಹೆಚ್ಚಾಗುತ್ತದೆ. ಇದರಿಂದ ರೈತರು ತಮ್ಮ ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ಕಾಲ ಕ್ರಮೇಣ 20-25% ರಷ್ಟು ಕಡಿಮೆ ಮಾಡಬಹುದು.
  • ರೋಗ ನಿರೋಧಕ ಶಕ್ತಿ: ಮಣ್ಣಿನಲ್ಲಿ ಉಪಯುಕ್ತ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾದಾಗ, ಅಡಿಕೆಗೆ ಬಾಧಿಸುವ ಕೆಲವು ರೋಗಗಳು ಕಡಿಮೆಯಾಗುತ್ತವೆ. ಗಿಡವು ಬಲಶಾಲಿಯಾಗಿ ಬೆಳೆಯುವುದರಿಂದ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಪಡೆಯುತ್ತದೆ.
  • ಎಳೆ ಕಾಯಿ ಉದುರುವುದನ್ನು ತಡೆಗಟ್ಟುವಿಕೆ: ಅಡಿಕೆಯಲ್ಲಿ ಎಳೆ ಕಾಯಿ ಉದುರುವುದು ದೊಡ್ಡ ಸಮಸ್ಯೆ. ಇದಕ್ಕೆ ಪೋಷಕಾಂಶಗಳ ಕೊರತೆ ಮತ್ತು ಹಾರ್ಮೋನ್ ಅಸಮತೋಲನ ಕಾರಣ. ರೆನುವಿಸ್ ಮಣ್ಣಿನಿಂದ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವುದರಿಂದ ಈ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ರೆನುವಿಸ್ ಬಳಕೆಯ ವಿಧಾನ ಮತ್ತು ಸಮಯ:

ಅಡಿಕೆ ತೋಟಗಳಲ್ಲಿ ರೆನುವಿಸ್ ಫಾಸ್-ಪ್ರೋ ಅಥವಾ ರೆನುವಿಸ್ ಫಾಸ್-ಪ್ರೋ ಕೋಟ್ ಅನ್ನು ವರ್ಷಕ್ಕೆ ಎರಡು ಬಾರಿ ಬಳಸುವುದು ಸೂಕ್ತ:

  1. ಮೊದಲ ಬಳಕೆ (ಮುಂಗಾರಿನ ಆರಂಭದಲ್ಲಿ – ಜೂನ್/ಜುಲೈ): ಮಳೆಗಾಲದ ಆರಂಭದಲ್ಲಿ ಬೇರುಗಳು ಸಕ್ರಿಯವಾಗುವ ಸಮಯವಿದು. ಈ ಸಮಯದಲ್ಲಿ ನೀಡಿದರೆ ಗೊಬ್ಬರ ಹೀರಿಕೊಳ್ಳುವ ಪ್ರಕ್ರಿಯೆ ಚುರುಕಾಗುತ್ತದೆ.
  2. ಎರಡನೇ ಬಳಕೆ (ಹಿಂಗಾರಿನ ಆರಂಭದಲ್ಲಿ – ಸೆಪ್ಟೆಂಬರ್/ಅಕ್ಟೋಬರ್): ಮಳೆ ಕಡಿಮೆಯಾದ ನಂತರ, ಮಣ್ಣಿನಲ್ಲಿ ತೇವಾಂಶ ಇರುವಾಗಲೇ ನೀಡಬೇಕು. ಇದು ಕಾಯಿಗಳ ಬೆಳವಣಿಗೆಗೆ ಸಹಕಾರಿ.

ರೆನುವಿಸ್ ಫಾಸ್-ಪ್ರೋ ಬಳಸುವ ಕ್ರಮ:

  • ಪ್ರತಿ ಎಕರೆಗೆ ಮುಂಗಾರಿನಲ್ಲಿ 1 ಲೀ ಮತ್ತು ಹಿಂಗಾರಿನಲ್ಲಿ 1 ಲೀ ರೆನುವಿಸ್ ಫಾಸ್-ಪ್ರೋ ಅನ್ನು 200 ಲೀಟರ್ ನೀರಿನಲ್ಲಿ ಬೆರೆಸಬೇಕು.
  • ಈ ದ್ರಾವಣವನ್ನು ಪ್ರತಿ ಅಡಿಕೆ ಮರದ ಬುಡಕ್ಕೆ (ಸುಮಾರು 2 ಅಡಿ ದೂರದಲ್ಲಿ) ಡ್ರೆಂಚಿಂಗ್ ಮಾಡಬೇಕು ಅಥವಾ ಹನಿ ನೀರಾವರಿ ಮೂಲಕವೂ ನೀಡಬಹುದು.
  • ಈ ದ್ರಾವಣದ ಜೊತೆಗೆ ಬೇರೆ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಮಿಶ್ರಣ ಮಾಡಿಯೂ ಸಹ ಉಪಯೋಗಿಸಬಹುದು.

ರೆನುವಿಸ್ ಫಾಸ್-ಪ್ರೋ ಕೋಟ್ ಬಳಸುವ ಕ್ರಮ:

  • ಪ್ರತಿ ಎಕರೆಗೆ ಮುಂಗಾರಿನಲ್ಲಿ 1 ಲೀ ಮತ್ತು ಹಿಂಗಾರಿನಲ್ಲಿ 1 ಲೀ ರೆನುವಿಸ್ ಫಾಸ್-ಪ್ರೋ ಕೋಟ್ ಅನ್ನು ರಸಾಯನಿಕ ಗೊಬ್ಬರಗಳಿಗೆ ಲೇಪನ ಮಾಡಿ ಉಪಯೋಗಿಸುವುದು.

ಅಡಿಕೆ ತೋಟದಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವುದು ಮಣ್ಣಿನ ಆರೋಗ್ಯಕ್ಕೆ ಅತ್ಯಂತ ಮುಖ್ಯ. ಇದರ ಪ್ರಮುಖ ಲಾಭಗಳು ಹೀಗಿವೆ:

  1. ಮಣ್ಣಿನ ಫಲವತ್ತತೆ: ಇವು ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಿ, ಮಣ್ಣನ್ನು ಮೃದುವಾಗಿಸುತ್ತವೆ. ಇದರಿಂದ ಬೇರುಗಳ ಸಂಚಾರ ಸುಲಭವಾಗುತ್ತದೆ.
  2. ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ: ಸಾವಯವ ಗೊಬ್ಬರಗಳು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ. ಬೇಸಿಗೆಯಲ್ಲಿ ಇದು ಅಡಿಕೆ ಮರಗಳಿಗೆ ಬಹಳ ಸಹಕಾರಿ.
  3. ಸೂಕ್ಷ್ಮಜೀವಿಗಳ ಅಭಿವೃದ್ಧಿ: ಮಣ್ಣಿನಲ್ಲಿ ಎರೆಹುಳು ಮತ್ತು ಉಪಯುಕ್ತ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸಲು ಇದು ಆಹಾರವಾಗಿ ಕೆಲಸ ಮಾಡುತ್ತದೆ.
  4. ಪೋಷಕಾಂಶಗಳ ಲಭ್ಯತೆ: ಇದು ಮುಖ್ಯ ಪೋಷಕಾಂಶಗಳ ಜೊತೆಗೆ, ಅಡಿಕೆಗೆ ಬೇಕಾದ ಲಘು ಪೋಷಕಾಂಶಗಳನ್ನು ಹಿಡಿದಿಡುತ್ತದೆ ಮತ್ತು ದೀರ್ಘಕಾಲದವರೆಗೆ ಒದಗಿಸುತ್ತದೆ.

ಅಡಿಕೆ ತೋಟಕ್ಕೆ ಈ ಕೆಳಗಿನ ಸಾವಯವ ಗೊಬ್ಬರಗಳನ್ನು ನೀಡಬಹುದು:

  1. ಕೊಟ್ಟಿಗೆ ಗೊಬ್ಬರಚೆನ್ನಾಗಿ ಕಳೆತ ಕೊಟ್ಟಿಗೆ ಗೊಬ್ಬರ ಅಡಿಕೆಗೆ ಅತ್ಯುತ್ತಮ. ಪ್ರತಿ ಮರಕ್ಕೆ ವರ್ಷಕ್ಕೆ ಕನಿಷ್ಠ 10-15 ಕೆ.ಜಿ. ಹಾಕಬೇಕು.
  2. ಎರೆಹುಳು ಗೊಬ್ಬರಇದು ತ್ವರಿತವಾಗಿ ಫಲಿತಾಂಶ ನೀಡುತ್ತದೆ.
  3. ಹಸಿರೆಲೆ ಗೊಬ್ಬರಗ್ಲಿರಿಸಿಡಿಯಾ, ಸೆಣಬು ಅಥವಾ ಡಯಾಂಚದಂತಹ ಗಿಡಗಳನ್ನು ತೋಟದ ಬದುಗಳಲ್ಲಿ ಬೆಳೆಸಿ, ಅವುಗಳ ಎಲೆಗಳನ್ನು ಮರದ ಬುಡಕ್ಕೆ ಹಾಕುವುದರಿಂದ ಸಾರಜನಕದ ಅಂಶ ಹೆಚ್ಚುತ್ತದೆ.
  4. ಅಡಿಕೆ ಸಿಪ್ಪೆಯ ಕಾಂಪೋಸ್ಟ್: ತೋಟದಲ್ಲಿ ಸಿಗುವ ಅಡಿಕೆ ಸಿಪ್ಪೆಯನ್ನು ಸುಮ್ಮನೆ ಎಸೆಯದೆ, ಅದನ್ನು ಕಾಂಪೋಸ್ಟ್ ಮಾಡಿ ಮತ್ತೆ ಗೊಬ್ಬರವಾಗಿ ಬಳಸಬಹುದು. ಇದು ಹೆಚ್ಚಿನ ಪೊಟ್ಯಾಷ್ ಅಂಶವನ್ನು ಹೊಂದಿರುತ್ತದೆ.
  5. ಹಿಂಡಿಗಳುಬೇವು, ಹೊಂಗೆ ಅಥವಾ ಶೇಂಗಾ ಹಿಂಡಿಯನ್ನು ಪುಡಿ ಮಾಡಿ ಮರದ ಬುಡಕ್ಕೆ ಹಾಕುವುದರಿಂದ ಪೋಷಕಾಂಶ ಸಿಗುವುದಲ್ಲದೆ, ಬೇರುಗಳಿಗೆ ಬರುವ ರೋಗಗಳೂ ಕಡಿಮೆಯಾಗುತ್ತವೆ.

ಇನ್ನು ರಸಾಯನಿಕ ಗೊಬ್ಬರಗಳನ್ನು ಕೊನೆಯ ಆಯ್ಕೆಯಾಗಿ, ಅವಶ್ಯಕ್ಕೆ ತಕ್ಕಷ್ಟು ಅಂದರೆ ಮಣ್ಣು ಪರೀಕ್ಷೆ ಆಧಾರದ ಮೇಲೆ ಸರಿಯಾದ ಗೊಬ್ಬರಗಳನ್ನು ಆಯ್ಕೆ ಮಾಡಿ, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಜಾಗದಲ್ಲಿ ಉಪಯೋಗಿಸಿದಾಗ ಹೆಚ್ಚಿನ ಲಾಭಗಳನ್ನು ಪಡೆಯಬಹುದು.

ಭವಿಷ್ಯದ ಕೃಷಿ ಮತ್ತು ಸುಸ್ಥಿರತೆ

ಇಂದಿನ ಕೃಷಿ ಪದ್ಧತಿಯಲ್ಲಿ ಮಣ್ಣು ಕೇವಲ ಗಿಡವನ್ನು ಹಿಡಿದಿಟ್ಟುಕೊಳ್ಳುವ ಮಾಧ್ಯಮವಲ್ಲ, ಅದು ಜೀವಂತ ವ್ಯವಸ್ಥೆ. ಮುಂದಿನ ಪೀಳಿಗೆಗೆ ನಾವು ಫಲವತ್ತಾದ ಭೂಮಿಯನ್ನು ಹಸ್ತಾಂತರಿಸಬೇಕಾದರೆ, ಇಂದೇ ನಾವು ಮಣ್ಣಿನ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು.

ರಾಸಾಯನಿಕ ಗೊಬ್ಬರಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಿ, ‘ರೆನುವಿಸ್’ ನಂತಹ ಜೈವಿಕ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಬಳಸುವುದೇ ಜಾಣತನದ ಕೃಷಿ. ಇದು “ಕಡಿಮೆ ಖರ್ಚು, ಹೆಚ್ಚು ಲಾಭ” ಮತ್ತು “ಮಣ್ಣಿನ ಉಳಿವು” ಎಂಬ ತತ್ವದ ಮೇಲೆ ಕೆಲಸ ಮಾಡುತ್ತದೆ.

ಅಡಿಕೆ ಬೆಳೆಗಾರರೇ, ನಿಮ್ಮ ತೋಟದ ಮಣ್ಣು ಫಲವತ್ತತೆ ಕಡಿಮೆಯಾಗಿ ಗಟ್ಟಿಯಾಗಿದೆಯೇ? ಎಷ್ಟೇ ಗೊಬ್ಬರ ಕೊಟ್ಟರೂ ಇಳುವರಿ ಏರುತ್ತಿಲ್ಲವೇ? ಹಾಗಾದರೆ ನಿಮ್ಮ ಮಣ್ಣಿಗೆ ಬೇಕಾಗಿರುವುದು ಇನ್ನಷ್ಟು ರಾಸಾಯನಿಕಗಳಲ್ಲ, ಬದಲಾಗಿ “ಜೀವ”. ಸಮಗ್ರ ಪೋಷಕಾಂಶ ನಿರ್ವಹಣೆಯ ಭಾಗವಾಗಿ ರೆನುವಿಸ್ ಅನ್ನು ಬಳಸಿ, ಮಣ್ಣನ್ನು ಪುನರುಜ್ಜೀವನಗೊಳಿಸಿ. ಆರೋಗ್ಯವಂತ ಮಣ್ಣು ಮಾತ್ರ ಆರೋಗ್ಯವಂತ ತೋಟ ಮತ್ತು ರೈತನ ಸಮೃದ್ಧಿಗೆ ಬುನಾದಿ.

ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಿ, ಸುಸ್ಥಿರ ಕೃಷಿಯತ್ತ ಹೆಜ್ಜೆ ಹಾಕಿ.

Share this post
Author: Admin Mosaic India is a 100% owned subsidiary of The Mosaic Company (USA) - World's largest combined producer of concentrated phosphate and potash.

Leave a Reply

Your email address will not be published. Required fields are marked *